SHRI K.K TUNGAL MEMORIAL TRUST (R), JAMKHANDI

TUNGAL SCHOOLS AND COLLEGES

                                                                           

 

 

                                                                                            

Satyam Shivam Sundaram...

        ಹುಟ್ಟಿನಿಂದ ಸಾಯುವ ವರೆಗೆ ಮನುಷ್ಯ ತನ್ನ ಬದುಕಿನ ಪರಮ ಸಾರ್ಥಕ್ಯವನ್ನು ಕಂಡುಕೊಳ್ಳಲು ಜೀವನವಿಡೀ ಹೋರಾಡುತ್ತಾನೆ. ಶಿಕ್ಷಣ ಅವನಿಗೆ ಬದುಕಿನ ಉದ್ದೇಶವನ್ನು ನಿರ್ದೇಶಿಸಬೇಕು ಎಂಬುದು ನಮ್ಮ ಆಶಯ. ಜೀವನದಲ್ಲಿ ಕಂಡುಕೊಂಡ ಸತ್ಯಗಳು ಮನುಷ್ಯನನ್ನು ಅಚ್ಚರಿಗೊಳಿಸುತ್ತಿವೆ, ಸಾಧನೆಗಾಗಿ ಪ್ರೇರೇಪಿಸುತ್ತವೆ.
        ಜಗದ ಸೃಷ್ಟಿ, ಜಗದ ವಿಕಾಸ ಇವುಗಳ ಒಳಗೆ ಅಗೋಚರವಾಗಿರುವುದೇ ಸತ್ಯ ಮತ್ತು ಬಾಹ್ಯವಾಗಿ ಸೌಂದರ್ಯ. ಈ ಸತ್ಯ-ಸೌಂದರ್ಯಗಳನ್ನು ಅರಸಿ, ಅರಿತು, ಅನುಭವಿಸಿ ಆಹ್ಲಾದಿಸುವುದೇ ಜೀವನಧರ್ಮ. ಇದನ್ನು ವ್ಯಕ್ತಿಯ ಭೌತಿಕ, ಮಾನಸಿಕ, ಬೌದ್ಧಿಕ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸ್ಥರಗಳಲ್ಲಿ ಅನುಭವಿಸಿ ಆಹ್ಲಾದಿಸುತ್ತಾ ಅದನ್ನು ತನ್ನ ಕುಟುಂಬ, ವ್ಯಕ್ತಿ ಹಾಗೂ ಸಾಮಾಜಿಕ ಜೀವನಕ್ಕೂ ವಿಸ್ತರಿಸುವ ಕಲೆಯನ್ನು ಕರಗತ ಮಾಡಿಸುವುದೇ ನಮ್ಮ ಧ್ಯೇಯ. ತನ್ನ್ಮೂಲಕ ಸುಂದರ ಸಮೃದ್ಧ ಸಮಾಜದ ನಿರ್ಮಾಣವನ್ನು ಸಾಕರಗೊಳಿಸುವುದು ನಮ್ಮ ಕನಸು. ಅದೇ ನಮ್ಮ ಧ್ಯೇಯವಾಕ್ಯ ಸತ್ಯಂ. ಶಿವಂ.. ಸುಂದರಂ... ಮೂರು ಮೂಲ ಬಣ್ಣಗಳು, ಭೌತಿಕ, ಭಾವನಾತ್ಮಕ ವಿಸ್ತಾರಗಳ ಮೂಲ ಸಂಕೇತಗಳು, ಅವುಗಳನ್ನು ವಿಸ್ತರಿಸಿ, ವಿವರಿಸಿ ತೋರಿಸುವ ಜ್ಞಾನದ ಸಂಕೇತವಾದ ಸೂರ್ಯ ಈ ಜ್ಞಾನದ ಬೆಳಕಿನಲ್ಲಿ ಮಾತ್ರ ಸತ್ಯವನ್ನು, ಸೌಂದರ್ಯವನ್ನು ಅರಿಯಲು, ಆನಂದಿಸಲು ಸಾಧ್ಯ.